ಒಳಪೊರೆ: ಅಂಗರಚನಾವಿಜ್ಞಾನದಲ್ಲಿ, ಗುಂಡಿಗೆ, ರಕ್ತನಾಳಗಳು, ಹಾಲು ರಸನಾಳಗಳ ಒಳಗಿನ, ಚಪ್ಪಟೆಯಾದ ಸರಳ ಜೀವಕಣಗಳಿಂದಾದ ಪದರ (ಎಂಡೊತೀಲಿಯಂ)ಕ್ಕೆ ಒಳಪೊರೆ ಎನ್ನುತ್ತಾರೆ. ಆದರೆ ಕಣ್ಣಿನ ಮುಂಗೋಣೆ, ಎದೆಗೂಡು, ಗುಂಡಿಗೆಸುತ್ತು ಪೊರೆ, ಒಡಲುಗಳ ಒಳಗಿನ ಪೊಳ್ಳುಗಳ ಒಳಗಿನ ಪೊರೆಗೂ ಒಳಪೊರೆ ಎನ್ನುವುದು ವಾಡಿಕೆ. ಸಾಮಾನ್ಯವಾಗಿ ಇದು ಹಗರಿನ ಮೇಲುಪೊರೆಯನ್ನು (ಸ್ಕ್ವೇಮಸ್ ಎಪಿತೀಲಿಯಂ) ಹೋಲುವುದಾದರೂ ಪಿಂಡದ ವಿಕಾಸದಲ್ಲಿ ಇವೆರಡೂ ಬೇರೆ ಮೂಲಗಳ ಪೊರೆಗಳಿಂದ ಏಳುತ್ತವೆ.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ